ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಜನಪ್ರಿಯ ಯಕ್ಷಗಾನ ಕಲಾ ಮಂಡಳಿಗೆ 60

ಲೇಖಕರು : ಉದಯವಾಣಿ
ಭಾನುವಾರ, ಜೂನ್ 19 , 2016
ಜೂನ್ 12 , 2016

ಜನಪ್ರಿಯ ಯಕ್ಷಗಾನ ಕಲಾ ಮಂಡಳಿಗೆ 60

ಮುಂಬೈ : ಯಕ್ಷಗಾನ ಕಲೆಯನ್ನು ಪರರಾಜ್ಯದಲ್ಲಿ ಪೋಷಿಸಿ, ಬೆಳೆಸಿ, ಮುಂದುರಿಸುವುದು ಸುಲಭ ಸಾಧನೆಯಲ್ಲ. ಮುಂಬೈಯ ಜನಪ್ರಿಯ ಯಕ್ಷಗಾನ ಕಲಾ ಮಂಡಳಿ ಇದನ್ನು ಮಾಡಿ ತೋರಿಸುತ್ತಿದೆ. ಈ ಮಂಡಳಿಗೆ ಈಗ ಅರುವತ್ತರ ಸಂಭ್ರಮ-ಮೆರುಗು.

ಜನಪ್ರಿಯ ಯಕ್ಷಗಾನ ಕಲಾಮಂಡಳಿಯು ಕುಂಬ್ಳೆ ಪುಂಡಲೀಕ್‌ ನಾಯಕ್‌, ಎಸ್‌. ವೆಂಕಟೇಶ್‌ ಮಲ್ಯ ಮತ್ತಿತರ ಕೆಲ ಕಲಾಪ್ರೇಮಿಗಳೊಂದಿಗೆ ಉಡುಪಿ ಮೂಲದ ಮುಂಬೈಯ ಖ್ಯಾತ ಹೊಟೇಲ್‌ ಉದ್ಯಮಿ ಕಲಾಪ್ರೇಮಿ ರಾಮ ನಾಯಕ್‌ ಅವರ ಪೂರ್ಣ ಬೆಂಬಲದೊಂದಿಗೆ ಆರಂಭವಾಯಿತು. ಶ್ರೀ ಕಾಶೀಮಠದ ಶ್ರೀಮತ್‌ ಸುಧೀಂದ್ರ ತೀರ್ಥ ಶ್ರೀಪಾದಂಗಳವರು "ಜನಪ್ರಿಯ ಯಕ್ಷಗಾನ ಕಲಾ ಮಂಡಳಿ' ಎಂಬ ನಾಮಕರಣದೊಂದಿಗೆ ಮಂಡಳಿಯನ್ನು ಶುಭಾರಂಭ ಮಾಡಿ, ಆಶೀರ್ವದಿಸಿದರು. 1956ರಲ್ಲಿ "ಜರಾಸಂಧ ವಧೆ' ಪ್ರಸಂಗದೊಂದಿಗೆ ಪ್ರದರ್ಶನ ಆರಂಭಿಸಿತು.

ಆ ಬಳಿಕ ಹೆಸರಿಗೆ ಅನ್ವರ್ಥವಾಗಿ ಮಂಡಳಿ ಜನಮಾನಸದಲ್ಲಿ ವಿಶೇಷ ಛಾಪು ಪಡಿಮೂಡಿಸಿ, ಜನಪ್ರಿಯತೆಯೆಡೆಗೆ ಸಾಗತೊಡಗಿದರೂ, ವೇಷ-ಭೂಷಣ, ಪರಿಕರಗಳ ಕೊರತೆಯ ಕಷ್ಟ ಎದುರಾಯಿತು. ಆದರೆ ಧೃತಿಗೆಡದೆ ಮುಂಬೈಯ ಇತರ ತಂಡಗಳಿಂದ ಬಾಡಿಗೆಗೆ ಪಡೆದು, ಕೊಂಕಣಿ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಯಕ್ಷ ಆಖ್ಯಾನ ಪ್ರದರ್ಶಿಸಿ ಕಲಾಸೇವೆಗೈಯಲಾರಂಭಿಸಿತು. ಕೆಲ ಕಾಲದ ಬಳಿಕ ರಾಮನಾಯಕರ ಮುತುವರ್ಜಿಯಿಂದ ಮಂಡಳಿ ಸಂಪೂರ್ಣ ಸ್ವಾವಲಂಬಿಯಾಯಿತು. ಈ ತನಕ ದೇಶದ ವಿವಿಧೆಡೆ ನೂರಾರು ಯಕ್ಷ ಪ್ರದರ್ಶನಗಳನ್ನು ನೀಡಿ ಯಕ್ಷ ಅಭಿಮಾನಿಗಳನ್ನು ರಂಜಿಸಿ ಪ್ರೀತಿಗೆ ಪಾತ್ರವಾಗಿದೆ ಈ ಮಂಡಳಿ.

ಪ್ರಸ್ತುತ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಯಕ್ಷ ಸೇವೆ ನಿಲ್ಲಿಸಿಲ್ಲ. ಮಂಡಳಿಯ ಕಲಾಪ್ರೇಮಕ್ಕೊಂದು ನಿದರ್ಶನವಿದು. ಜನಪ್ರಿಯ ಯಕ್ಷಗಾನ ಕಲಾ ಮಂಡಳಿ ಯಕ್ಷಮಾತೆಯ ಸೇವೆ - ರಂಗದಲ್ಲಿ ಮತ್ತಷ್ಟು ಜನಪ್ರಿಯವಾಗಲಿ. ಭವಿಷ್ಯ ಉಜ್ವಲವಾಗಲಿ.

ಕೃಪೆ : udayavani


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ